Thursday, October 15, 2015

ಎನಗೂ ಆಣೆ ರಂಗ ನಿನಗೂ ಆಣೆ

ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ II1II
shreerayarublogspotತನುಮನಧನದಲ್ಲಿ ವ೦ಚಕನಾದರೆ ಎನಗೆ ಆಣೆ ರಂಗ
ಮನಸ್ಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ II2II

ಕಾಕು ಮನುಜರ ಸ೦ಗದಿ ಮಾಡಿದರೆನಗೆ ಆಣೆ ರಂಗ
ಲೌಕೀಕವ ಬಿಡಿಸದಿದ್ದರೆ ನಿನಗೆ ಆಣೆ II3II

ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆII4II

ಹರಿನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೋಲಿಯದಿದ್ದರೆ ನಿನಗೆ ಆಣೆII5II



ಅಳುವ ಕಡಲೊಳು ತೇಲಿ ಬರುತಲಿದೆ

ಅಳುವ ಕಡಲೊಳು ತೇಲಿ ಬರುತಲಿದೆ / Aluva kadalolu teli barutalide

ಅಳುವ ಕಡಲೊಳು ತೇಲಿ ಬರುತಲಿದೆ
      ನಗೆಯ ಹಾಯಿ ದೋಣಿ |
ಬಾಳ ಗಂಗೆಯ ಮಹಾ ಪೂರದೊಳು
      ಸಾವಿನೊಂದು ವೇಣಿ ||

ನೆರೆತಿದೆ ಬೆರೆತಿದೆ ಕುಣಿವ ಮೊರೆವ
      ತೆರೆ ತೆರೆಗಳೋಳಿಯಲ್ಲಿ |
ಜನನ ಮರಣಗಳ ಉಬ್ಬುತಗ್ಗು ಹೊರ
      ಳುರುಳುವಾಟವಲ್ಲಿ ||

ಆಶೆ ಬೂದಿ ತಳದಲ್ಲು ಕೆರಳುತಿವೆ
      ಕಡಿಗಳೆನಿತೋ ಮರಳಿ |
ಮುರಿದು ಬಿದ್ದ ಮನ ಮರದ ಕೊರಡೊಳು
      ಹೂವು ಅರಳಿ ಅರಳಿ  ||

ಕೂಡಲಾರದೆದೆಯಾಳದಲ್ಲೂ
 ಕಂಡಿತು ಏಕಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲೂ
ಬಿನ್ನತೆಯ ವಿಕಟಹಾಸ್ಯ ।।

ಎತ್ತರೆತ್ತರಕೆ ಏರುವ ಮನಕು
ಕೆಸರ ಲೇಪ ಲೇಪ।
ಹೊಳೆಯ ಕೊಳಚೆಯಲಿ ಮುಳುಗಿ ಕಂಡೆನೋ
ಬಾನಿನೊಂದು ಪೆಂಪ।।

ತುಮ್ಬುಗತ್ತಲಿನೆ ಬಸಿರನಾಳುತಿದೆ
ಒಂದು ಅಗ್ನಿ ಪಿಂಡ।
ತಮದ ಘಾದ ಹೊನಲಲ್ಲು ಹೊಳೆಯುತಿದೆ ಸತ್ವ ಒಂದ ಕಂಡ

ಆಶೆಯೆಂಬ ತಳವೊಡೆದ ದೋಣಿಯಲಿ
      ದೂರತೀರಯಾನ |
ಯಾರ ಲೀಲೆಗೋ ಯಾರೋ ಏನೋ ಗುರಿ
      ಯಿರದೆ ಬಿಟ್ಟ ಬಾಣ ||

ಇದು ಬಾಳು ನೋಡು ಇದ ತಿಳಿದೆನೆಂದರೂ
      ತಿಳಿದ ಧೀರನಿಲ್ಲಿ |
ಹಲವುತನದ ಮೈ ಮರೆಸುವಾತವಿದು
      ನಿಜವು ತೋರದಲ್ಲಿ ||

ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾ
      ವೇಕೊ ಮಲೆತು ಕಲೆತು
ಕೊನೆಗೆ ಕರಗುವೆವು ಮರಣ ತೀರ ಘನ
      ತಿಮಿರದಲ್ಲಿ ಬೆರೆತು ||

                                                         - ಎಂ.ಗೋಪಾಲ ಕೃಷ್ಣ ಅಡಿಗ