Saturday, November 3, 2012

folk songs

ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ
ಹಾರ್‍ಹಾರಿ ಮಣ್ಣಾ ತುಳಿದಾನ |
ಹಾರಿ ಹಾರ್‍ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ
ನಾರ್‍ಯಾರು ಹೊರುವಂತ ಐರಾಣಿ.. ||

ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ
ಘಟ್ಟಿಸಿ ಮಣ್ಣಾ ತುಳಿದಾನ |
ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ
ಮಿತ್ರೇರು ಹೊರುವಂತ ಐರಾಣಿ.. ||

ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ
ಗಿಂಡೀಲಿ ತಂದೀವಿ ತಿಳಿದುಪ್ಪಾ |
ಗಿಂಡೀಲಿ ತಂದೀವಿ ತಿಳಿದುಪ್ಪಾ ಕುಂಬಾರಣ್ಣ
ತುಂಬೀತು ನಮ್ಮ ಐರಾಣಿ.. ||

ಕುಂಬಾರಣ್ಣನ ಮಡದಿ ಕಡದಾಗ ಕೈಯಿಟ್ಟು
ಕೊಡದಾ ಮ್ಯಾಲೇನ ಬರದಾಳ |
ಕೊಡದಾ ಮ್ಯಾಲೇನ ಬರದಾಳ್ ಕಲ್ಯಾಣದ
ಶರಣ ಬಸವನ ನೆನೆಸ್ಯಾಳ.. ||
 

ಯಾವ ಮೋಹನ ಮುರಳಿ ಕರೆಯಿತು

ರಚನೆ : ಎಂ. ಗೋಪಾಲಕೃಷ್ಣ ಅಡಿಗರು
ಸಂಗೀತ : ಮೈಸೂರು ಅನಂತಸ್ವಾಮಿ
ಗಾಯನ : ರತ್ನಮಾಲ ಪ್ರಕಾಶ್

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು...

ಹೂವು ಹಾಸಿಗೆ ಚಂದ್ರ ಚಂದನ‌
ಬಾಹು ಬಂಧನ ಚುಂಬನ‌
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದಿ ರಿಂಗಣ‌

ಸಪ್ತಸಾಗರದಾಚೆಗೆಲ್ಲೊ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ‌
ಇಂದು ಇಲ್ಲಿಗು ಹಾಯಿತೆ...

ವಿವಷವಾಯಿತು ಪ್ರಾಣಹಃ
ಪರವಷವು ನಿನ್ನೀ ಚೇತನ‌
ಇರುವುದೆಲ್ಲವ ಬಿಟ್ಟು,
ಇರದುದರೆಡೆಗೆ ತುಡಿವುದೆ ಜೀವನ....

ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದೊಡೆ ನಿನ್ನನು
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯನು...
 

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು

ಗಾಯನ: ರವಿ
ಸಾಹಿತ್ಯ: ಎಂ.ಎನ್. ವ್ಯಾಸರಾವ್
ಸಂಗೀತ: ವಿಜಯಭಾಸ್ಕರ
This is the song from the movie"shubha magala".
Starring includes Srinath, Arathi,Ambarish and shivaram. 


ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು,
ಅರಮನ್ಯಾಗೆ ಏನೈತೆ ಸೊಗಸು

ಮನೆತುಂಬ ಹರಿದೈತೆ ಕೆನೆಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು, ಬ್ಯಾಸರದಾ ಉಸಿರು
ಗುಡಿಯಾಗೆ ಬೆಳ್‍ಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ, ಸಿಡಿದೈತೆ ಕ್ವಾಪ

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು

ಬೆಳದಿಂಗಳು ಚೆಲ್ಲೈತೆ ಅಂಗಳದಾ ಹೊರಗೇ
ಕರಿಮೋಡ ಮುಸುಕೈತೆ ಮನಸಿನಾ ಒಳಗೇ
ಬಯಲಾಗೆ ತುಳುಕೈತೆ ಹರುಸದಾ ಒನಲು
ಪ್ರೀತಿಯಾ ತೇರಿಗೇ ಬಡಿದೈತೆ ಸಿಡಿಲು,ಬಡಿದೈತೆ ಸಿಡಿಲು

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು

ಮುಂಬಾಗಿಲ ರಂಗೋಲಿ ಮನಗೈತೆ ಹಾಯಾಗೀ
ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗೀ
ಆನಂದ ಸಂತೋಸ ಈ ಮನೆಗೆ ಬರಲೀ
ಬೇಡುವೆನು ಕೈಮುಗಿದು ಆ ನನ್ನ ಸಿವನಾ,ಆ ನನ್ನ ಸಿವನಾ

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
 

ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ

ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
This is the song from the movie"shubha magala".
Starring includes Srinath, Arathi,Ambarish and shivaram.

ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ..2
ಪಯಣಿಗ ನಾನಮ್ಮ ಪಯಣಿಗ ನಾನಮ್ಮ!

ಪ್ರೀತಿಯ ತೀರವ, ಸೇರುವುದೊಂದೇ
ಪ್ರೀತಿಯ ತೀರವ, ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ

ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ ಪಯಣಿಗ ನಾನಮ್ಮ, ಪಯಣಿಗ ನಾನಮ್ಮ!

ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ ಅಹ್ ಅಹ
ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ
ಆಟದೆ ಸೋತು, ರೋಷದೆ ಕಚ್ಚಿದ;
ಆಟದೆ ಸೋತು, ರೋಷದೆ ಕಚ್ಚಿದ
ಗಾಯವ ಮರೆತಿಲ್ಲ ಅಹ ಅಹ!
ಗಾಯವ ಮರೆತಿಲ್ಲ ಅಹ ಅಹ

ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ ಪಯಣಿಗ ನಾನಮ್ಮ!

ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ ಹೂ
ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಎನ್ನುತ ನಾನು, ಕೆಣಕಲು ನಿನ್ನ,
ಎನ್ನುತ ನಾನು, ಕೆಣಕಲು ನಿನ್ನ ಉದಿಸಿದೆ ಕೆನ್ನೆ ಹೇ
ನಾನದ ಮರೆಯುವೆನೆ?

ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಸ್ನೇಹದ ಕಡಲಲ್ಲಿ ನೆನಪಿನ ದೋಣೀಯಲೀ
ಪಯಣಿಗ ನಾನಮ್ಮ ಪಯಣಿಗ ನಾನಮ್ಮ!

ಪ್ರೀತಿಯ ತೀರವ, ಸೇರುವುದೊಂದೇ
ಪ್ರೀತಿಯ ತೀರವ, ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ
 
ಗಾಯನ: ಎಸ್.ಜಾನಕಿ.
ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಸಂಗೀತ: ವಿಜಯಭಾಸ್ಕರ್ 


ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲೀ
ಬಂದು ನಿಂತೆ ಹೇಗೊ ಎನೋ
ನನ್ನ ಮನದ ಗುಡಿಯಲೀ

ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲೀ

ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆಯದರಲೀ
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲೀ

ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲೀ


ಕಂಗಳಲ್ಲೇ ಕವನ ಬರೆದು
ಕಳುಹಿದೆ ನೀ ನಿಲ್ಲಿಗೇ
ಅಂಗಳದೇ ಅರಳಿತಾಗ
ನನ್ನ ಒಲವ ಮಲ್ಲಿಗೇ

ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲೀ


ಸಾಹಿತ್ಯ : ಅರ್.ಎನ್.ಜಯಗೋಪಾಲ್
ಸಂಗೀತ : ಜಿ.ಕೆ.ವಂಕಟೇಶ್
ಗಾಯನ : ಪಿ.ಬಿ.ಶ್ರೀನಿವಾಸ್

ಆಹಹಾ.. ಆಹ.ಹಾ.ಆಹ.ಹ..ಹಹಾ
ನಗು ನಗುತಾ ನಲೀ ನಲೀ ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ ನಗು ನಗುತಾ ನಲೀ ನಲೀ ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ
ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ
ನಗು ನಗುತಾ ನಲೀ ನಲೀ ಏನೇ ಆಗಲಿ

ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ
ನಗು ನಗುತಾ ನಲೀ ನಲೀ ಏನೇ ಆಗಲಿ

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ ಮದುವೆ ಬ೦ಧನ

ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ
ನಗು ನಗುತಾ ನಲೀ ನಲೀ ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿ ನೋಡ
ನಗು ನಗುತಾ ನಲೀ ನಲೀ ಏನೇ ಆಗಲಿ
 

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಉಪೇಂದ್ರಕುಮಾರ್
ಗಾಯನ : ಡಾ.ರಾಜ್ ಕುಮಾರ್ 


ಸಪ್ತಪದೀ....ಇದು ಸಪ್ತಪದೀ.......
ಈ ಏಳು ಹೆಜ್ಜೆಗಳ ಈ ಸಂಬಂಧ....
ನಮ್ಮಏಳು ಜನುಮಗಳ ಅನುಬಂಧ

ನಿನ್ನೊಡನೆ ನನ್ನ ಜೀವನದಾ ಮೊದಲ ಹೆಜ್ಜೆ ಇಡುವೆ
ಇದಕೆ ಹರಿಯ ಸಾಕ್ಷಿ ಎನುವೆ
ಸ್ವರ್ಗಸಮಾನ ಸುಖವ ನೀಡೆಂದು ಕೈಗಳನೂ ಮುಗಿವೆ
ಎರಡನೆ ಹೆಜ್ಜೆಯನು ಇಡುವೆ

ಸಪ್ತಪದೀ....ಇದು ಸಪ್ತಪದೀ.......
ಈ ಏಳು ಹೆಜ್ಜೆಗಳ ಈ ಸಂಬಂಧ....
ನಮ್ಮಏಳು ಜನುಮಗಳ ಅನುಬಂಧ

ಮೂರುಕಾಲದಲು ಏಕರೀತಿಯಲಿ ನಾ ಸಹಚರನಾಗಿರುವೆ
ಮೂರನೆ ಹೆಜ್ಜೆಯನು ಇಡುವೆ
ಮಮತೆ ಮೋಹ ಸುಖದು:ಖದಲಿ ಜೊತೆಯಲ್ಲೇ ಇರುವೆ
ನಾಲ್ಕನೆ ಹೆಜ್ಜೆಯನು ಇಡುವೆ

ಸಪ್ತಪದೀ....ಇದು ಸಪ್ತಪದೀ.......
ಈ ಏಳು ಹೆಜ್ಜೆಗಳ ಈ ಸಂಬಂಧ....
ನಮ್ಮಏಳು ಜನುಮಗಳ ಅನುಬಂಧ

ಜೊತೆಯಾಗಿ ನಾವು ಅಜ್ಞಾನದಿಂದ
ಜೊತೆಯಾಗಿ ನಾವು ಅಜ್ಞಾನದಿಂದ ಮುಕ್ತರಾಗೋಣ ಎನುತಾ
ಐದನೆ ಹೆಜ್ಜೆಯನು ಇಡುವೆ
ಆರು ಋತುಗಳಲಿ ನಲಿವ ಪ್ರಕೃತಿಯು ಸ್ವಾಗತ ನೀಡಲಿ ಎನುವೆ
ಆರನೆ ಹೆಜ್ಜೆಯನು ಇಡುವೆ
ಸಪ್ತಋಷಿಗಳಾ ಸ್ಮರಣೆ ಮಾಡುತಾ ಹರಸಿ ನಮ್ಮನು ಎಂದು ಬೇಡುತಾ
ಏಳನೆ ಹೆಜ್ಜೆ ಇಡುವೆ ನಾ ಏಳನೆ ಹೆಜ್ಜೆ ಇಡುವೆ

ಸಪ್ತಪದೀ....ಇದು ಸಪ್ತಪದೀ.......
ಈ ಏಳು ಹೆಜ್ಜೆಗಳ ಈ ಸಂಬಂಧ....
ನಮ್ಮಏಳು ಜನುಮಗಳ ಅನುಬಂಧ}

Friday, November 2, 2012

My Favorite Lirics


ಮೋಹನ ಮುರಲಿ

ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು, ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

                                                             - ಎಂ. ಗೋಪಾಲಕೃಷ್ಣ ಅಡಿಗ


ಹಾಡುವ ಹಕ್ಕಿಗೆ ಹೂವಿನ ರೆಂಬೆ

ಹಾಡುವ ಹಕ್ಕಿಗೆ ಹೂವಿನ ರೆಂಬೆ
ಕಂದನ ಕೈಗೆ ಬಣ್ಣದ ಗೊಂಬೆ
ಆಶೀರ್ವದಿಸಲಿ ಈ ಹೊಸ ವರ್ಷ
ಪ್ರಾಯದ ಗಂಡಿಗೆ ಪ್ರೀತಿಯ ರಂಭೆ

ಖಾಲಿ ಆಗಸಕೆ ಕಪ್ಪನೆ ಮೋಡ
ಬೆಂದ ಜೀವಕೆ ಬೆಚ್ಚನೆ ಗೂಡ
ಬಾಗಿನ ನೀಡಲಿ ಈ ಹೊಸ ವರ್ಷ
ಕವಿ ಕಲ್ಪನೆಗೆ ಹೊಸ ಹೊಸ ಹಾಡ

ನಲ್ಲಿಯ ಬಾಯಿಗೆ ನಿಲ್ಲದ ನೀರು
ಹೊತ್ತು ಹೊತ್ತಿಗೆ ತಪ್ಪದೆ ಹಾಲು
ಸಿಗುವಂತಾಗಲಿ ಈ ಹೊಸ ವರ್ಷ
ಬಡವರಿಗೂ ಮೈ ತುಂಬಾ ನೂಲು

ಬಿರಿದ ಭೂಮಿಗೆ ಸುರಿಯುವ ಧಾರೆ
ಮಿರಿ ಮಿರಿ ಮಿಂಚಿನ ಗದ್ದೆಯ ಮೋರೆ
ತರುವಂತಾಗಲಿ ಈ ಹೊಸ ವರ್ಷ
ಮೆರೆಯಲಿ ನಾಡಿನ ಭಾಗ್ಯದ ತಾರೆ

                                           - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಹಳೆಯ ಹಾಡು

ಹಾಡು ಹಳೆಯದಾದರೇನು
ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒಂದು ಸಾಧನ.

ಹಳೆಯ ಹಾಡ ಹಾಡು ಮತ್ತೆ
ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು
ಜೀವನವನೆ ಕಟ್ಟುವೆ.

ಹಾಡನೊಲಿದು ಕೇಳುವನಿತು
ತೆರೆದ ಹೃದಯ ನನಗಿದೆ
ಅಷ್ಟೆ ಸಾಕು; ಹಾಡು ನೀನು
ಅದನೆ ಕೇಳಿ ಸುಖಿಸುವೆ.

ಹಮ್ಮು ಬಿಮ್ಮು ಒಂದು ಇಲ್ಲ
ಹಾಡು, ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗ-
ಲೆನ್ನ ಮನವು ಕಾದಿದೆ.

                            - ಜಿ. ಎಸ್. ಶಿವರುದ್ರಪ್ಪ
                              'ಸಾಮಗಾನ'

ತೃಪ್ತಿ 

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ,
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
                              - ಜಿ.ಎಸ್. ಶಿವರುದ್ರಪ್ಪ
                               'ಸಾಮಗಾನ'

ಸ್ತ್ರೀ

ಆಕಾಶದ ನೀಲಿಯಲ್ಲಿ
ಚಂದ್ರ-ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ -

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ -

ಮರ ಗಿಡ ಹೂ ಮುಂಗುರಳನು
ತಂಗಾಳಿಯ ಬೆರಳ ಸವರಿ
ಹಕ್ಕಿಗಿಲಕಿ ಹಿಡಿಸಿದಾಕೆ -

ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗನ್ನವುಣಿಸಿ
ತಂದೆ-ಮಗುವ ತಬ್ಬಿದಾಕೆ -

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ?

                        - ಜಿ.ಎಸ್. ಶಿವರುದ್ರಪ್ಪ
                           ' ತೆರೆದ ದಾರಿ '