Saturday, November 3, 2012

ಯಾವ ಮೋಹನ ಮುರಳಿ ಕರೆಯಿತು

ರಚನೆ : ಎಂ. ಗೋಪಾಲಕೃಷ್ಣ ಅಡಿಗರು
ಸಂಗೀತ : ಮೈಸೂರು ಅನಂತಸ್ವಾಮಿ
ಗಾಯನ : ರತ್ನಮಾಲ ಪ್ರಕಾಶ್

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು...

ಹೂವು ಹಾಸಿಗೆ ಚಂದ್ರ ಚಂದನ‌
ಬಾಹು ಬಂಧನ ಚುಂಬನ‌
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದಿ ರಿಂಗಣ‌

ಸಪ್ತಸಾಗರದಾಚೆಗೆಲ್ಲೊ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ‌
ಇಂದು ಇಲ್ಲಿಗು ಹಾಯಿತೆ...

ವಿವಷವಾಯಿತು ಪ್ರಾಣಹಃ
ಪರವಷವು ನಿನ್ನೀ ಚೇತನ‌
ಇರುವುದೆಲ್ಲವ ಬಿಟ್ಟು,
ಇರದುದರೆಡೆಗೆ ತುಡಿವುದೆ ಜೀವನ....

ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದೊಡೆ ನಿನ್ನನು
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯನು...
 

No comments: