ನಮ್ಮೂರ ಮಂದಾರ...
- ದೊಡ್ಡರಂಗೆ ಗೌಡ
ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು ||
ಕಣ್ಣಲ್ಲೆ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ
ಒಡಲಾಡ ಮೊರೆದು ಒಡನಾಟ ಮೆರೆದು
ಒಡನಾಡಿ ಭಾಂದವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ
- ದೊಡ್ಡರಂಗೆ ಗೌಡ
ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು ||
ಕಣ್ಣಲ್ಲೆ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ
ಒಡಲಾಡ ಮೊರೆದು ಒಡನಾಟ ಮೆರೆದು
ಒಡನಾಡಿ ಭಾಂದವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ
No comments:
Post a Comment