Thursday, January 31, 2013

ಕೆ. ಎಸ್. ನಿಸ್ಸಾರ್ ಅಹ್ಮೆದ್--ಎಲ್ಲ ಮರೆತಿರುವಾಗ...

ಎಲ್ಲ ಮರೆತಿರುವಾಗ...


- ಕೆ. ಎಸ್. ನಿಸ್ಸಾರ್ ಅಹ್ಮೆದ್

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ ||
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ ?

ಕಪ್ಪು ಕಣ್ಣಿನ ದಿಟ್ಟ ನೋಟದರೆಕ್ಷಣದಲ್ಲಿ
ತೊಟ್ಟ ಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೇ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ

ಸತ್ತ ಬೂತವನೆತ್ತಿ ಹತ್ತಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂದಿರುವೆ
ಬೆನ್ನಲ್ಲೇ ಇರಿಯದಿರು ಚೆಂದ ನೆನಪೇ


No comments: